Monkey Fruit / ವಾಟೆ ಹಣ್ಣು

ಅಡುಗೆಗೆ ಹುಳಿ ಅಂಶ ಬೇಕು ಅಂದಾಗ ಎಂತಹವರಿಗೂ ನೆನಪಿಗೆ ಬರೋದು ಹುಣಸೇ ಹಣ್ಣು ಬಿಟ್ರೆ ನಿಂಬೆ ಹಣ್ಣು..ಆದ್ರೆ ಮಲೆನಾಡಿನವರಿಗೆ ಕೇಳಿದ್ರೆ, ವಾಟೆ ಹುಳಿ ಹಾಕಿ ಅಡುಗೆ ಮಾಡಿ ನೋಡಿ ಅದರ ರುಚಿಯೇ ಬೇರೆ ಅಂತ ಉದ್ಗಾರ ತೆಗೀತಾರೆ..ಮಲೆನಾಡಿನ ಎಷ್ಟೋ ಅಡುಗೆ ಮನೆಗಳಲ್ಲಿ ಇಂದಿಗೂ ಹುಣಸೇ ಹಣ್ಣಿಗೆ ಜಾಗ ಇಲ್ಲ ಯಾಕೆಂದ್ರೆ ಅಂತಹ ಅಡುಗೆ ಮನೆಯ ಕಪ್ಪು ಹಿಡಿದ ಡಬ್ಬಿಯೊಳಗೆ ವಾಟೆ ಹುಳಿ ಜಾಗ ಪಡೆದಿರುತ್ತೆ.. ವಾಟೆ ಮರ ವರ್ಷಕ್ಕೊಂದು ಫಸಲು ಕೊಡುತ್ತೆ..ಸಾಮಾನ್ಯವಾಗಿ ಮಳೆಗಾಲ ಶುರುವಾಗುವುದಕ್ಕೂ ತಿಂಗಳು ಮೊದಲು ವಾಟೆ ಕಾಯಿ ಕೊಯ್ಯಲು ಯೋಗ್ಯವಾಗಿರುತ್ತೆ.. ವಾಟೆ ಮರಗಳಲ್ಲಿ ಹೆಣ್ಣು ಮರ ಮತ್ತು ಗಂಡು ಮರ ಎಂದು ವಿಂಗಡಿಸುತ್ತಾರೆ..ಗಂಡು ಮರದ ಎಲೆಯ ಗಾತ್ರ ಹೆಣ್ಣು ಮರದ ಎಲೆಗಿಂತಲೂ ದೊಡ್ಡದಾಗಿರುತ್ತದೆ. ವಿಶೇಷವೆಂದರೆ ಹೆಣ್ಣು ಮರ ಮಾತ್ರವೇ ಫಸಲು ಕೊಡುತ್ತದೆ..ಗಂಡು ಮರದಲ್ಲಿ ವಾಟೆ ಕಾಯಿ ಬಿಡುವುದಿಲ್ಲ… ವಾಟೆ ಕಾಯಿಯನ್ನು ಕೊಯ್ದು , ಅದನ್ನು ಹೆಚ್ಚಿ ಬಿಸಿಲಿನಲ್ಲಿ ಒಣಗಿಸುತ್ತಾರೆ..ಕೆಲವರು ಹೆಚ್ಚಿದ ವಾಟೆ ಹುಳಿಯನ್ನು ಉಪ್ಪಿನ ನೀರಿನಲ್ಲಿ ನೆನೆಸಿ ಒಣಗಿಸುತ್ತಾರೆ…ಉಪ್ಪಿನ ಅಂಶ ಇದ್ದರೆ ವಾಟೆ ಹುಳಿ ಹೆಚ್ಚು ದಿನದ ವರೆಗೆ ಹಾಳಾಗದೆ ಇರುತ್ತದೆ. ವಾಟೆ ಹುಳಿ ಹಾಕಿ ಮಾಡಿದ ಅಡುಗೆಯ ರುಚಿ ಸವಿಯಲು ಮಲೆನಾಡಿಗೆ ಬನ್ನಿ..


When cooking needs a sour ingredient, we remember the tamarind fruit or lemon fruit. But people of Western-Ghats of Karnataka will remember Monkey Fruit because it gives food a very different flavour. Monkey Fruit grows annually just a month or two before the Monsoon sets in. A monkey fruit tree is generally classified int Male and Female trees, male trees leave will be larger compared to female trees leaves. Only female trees bear these fruits. People pluck these fruits from the tree, later they chop them and will dry it under sunshine( few people even dip these chopped fruits in saltwater before drying them, because salt helps in its preservation for much longer period of time).

Information & Images provided by : Mandara Bhat

About the author

ashwin

View all posts

1 Comment

  • Thank you for sharing superb informations. Your website is so cool. I am impressed by the details that you have on this blog. It reveals how nicely you understand this subject. Bookmarked this web page, will come back for more articles. You, my pal, ROCK! I found just the information I already searched all over the place and just couldn’t come across. What an ideal web site.

Leave a Reply

Your email address will not be published. Required fields are marked *